ಸಿನಿಮಾ ಸೆನ್ಸಾರ್ ಮಾಡಲು ಲಂಚ : ನಟ ವಿಶಾಲ್ ಆರೋಪ : ತನಿಖೆಗೆ ಆದೇಶ

| All Image Courtesy : @VishalKOfficial/Twitter

ತಮಿಳು ನಟ ವಿಶಾಲ್ ಸಿಬಿಎಫ್‍ಸಿ - ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ವಿರುದ್ಧ ಲಕ್ಷಾಂತರ ರೂಪಾಯಿ ಲಂಚದ ಆರೋಪ ಮಾಡಿದ್ದಾರೆ

`ಮಾರ್ಕ್ ಆಂಟೋನಿ' ಸಿನಿಮಾದ ಹಿಂದಿ ವರ್ಷನ್ ಸೆನ್ಸಾರ್‍ಗೆ ಮುಂಬೈನ ಸಿಬಿಎಫ್‍ಸಿ ಕಚೇರಿ ಅಧಿಕಾರಿಗಳು 6.50 ಲಕ್ಷ ರೂ. ಲಂಚ ಕೇಳಿದ್ದರು. ಅದನ್ನು ಕೊಟ್ಟಿದ್ದೇನೆ ಎಂದ ವಿಶಾಲ್

ಯಾವುದೇ ನಿರ್ಮಾಪಕರಿಗೆ ಈ ರೀತಿ ಆಗಬಾರದೆಂದು ಈ ಸಂಗತಿ ಬಹಿರಂಗಪಡಿಸುತ್ತಿರುವುದಾಗಿ ಹೇಳಿರುವ ತಮಿಳು ನಟ

ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ವಿಶಾಲ್ ಮನವಿ

ಒಂದು ಬ್ಯಾಂಕ್ ಖಾತೆಗೆ 3 ಲಕ್ಷ ರೂ. ಮತ್ತು ಇನ್ನೊಂದು ಬ್ಯಾಂಕ್ ಖಾತೆಗೆ 3.50 ಲಕ್ಷ ರೂ. ಸೇರಿ ಎರಡು ಕಂತುಗಳಲ್ಲಿ 6.50 ಲಕ್ಷ ರೂ. ಕಳುಹಿಸಿದ್ದೇನೆ ಎಂದ ವಿಶಾಲ್

ತಮಿಳು, ತೆಲುಗಿನಲ್ಲಿ ರಿಲೀಸ್ ಆಗಿದ್ದ ಮಾರ್ಕ್ ಆಂಟೋನಿ. ಹಿಂದಿಗೂ ಡಬ್ ಆಗಿರುವ ಸಿನಿಮಾ ಸೆ.28ರಂದು ತೆರೆಗೆ ಬಂದಿದೆ

ನಟ ವಿಶಾಲ್ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ತನಿಖೆಗೆ ಆದೇಶ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮದ ಭರವಸೆ

ದಯವಿಟ್ಟು ಯಾವುದೇ ಮಧ್ಯವರ್ತಿ ಅಥವಾ ಮೂರನೇ ವ್ಯಕ್ತಿಯ ಏಜೆಂಟ್‍ನೊಂದಿಗೆ ವ್ಯವಹರಿಸಬೇಡಿ ಎಂದು ಸಿಬಿಎಫ್‍ಸಿ ಮನವಿ. ಯಾರಾದರೂ ಲಂಚ ಕೇಳಿದರೆ ceo.cbfc@nic.in, romum.cbfc@nic.inಗೆ ಸಂಪರ್ಕಿಸುವಂತೆಯೂ ಕೇಳಿದ ಸೆನ್ಸಾರ್ ಮಂಡಳಿ

ಇಂತಹ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಘನತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಸಿಬಿಎಫ್‍ಸಿ