21 ವರ್ಷಗಳ ಬಳಿಕ ಒಟ್ಟಿಗೆ ಒಂದೇ ಸ್ಟುಡಿಯೋದಲ್ಲಿ ಶೂಟಿಂಗ್!

Image : @LycaProductions

ಕಮಲ್ ಹಾಸನ್ ಮತ್ತು ರಜನಿಕಾಂತ್ ಆರಂಭದಿಂದಲೂ ಉತ್ತಮ ಗೆಳೆಯರು

ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಕಮಲ್ - ರಜನಿಕಾಂತ್ ಬಳಿಕ ಒಮ್ಮತದಿಂದ ಪ್ರತ್ಯೇಕ ದಾರಿಯನ್ನು ಕಂಡುಕೊಂಡಿದ್ದರು

ತಮಗಾಗಿ ಪ್ರತ್ಯೇಕ ಇಮೇಜ್ ಸೃಷ್ಟಿಸಿದರೂ ಇವರಿಬ್ಬರು ಅತ್ಯಂತ ಆತ್ಮೀಯ ಸ್ನೇಹಿತರಾಗಿ ಮುಂದುವರಿಯುತ್ತಿದ್ದಾರೆ

ಇದೀಗ ಕಮಲ್ ಮತ್ತು ರಜನಿಕಾಂತ್ 21 ವರ್ಷಗಳ ಬಳಿಕ ಒಂದೇ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ

ಕಮಲ್ ಹಾಸನ್ `ಇಂಡಿಯನ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ

ರಜನಿಕಾಂತ್ `ತಲೈವರ್ 170' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ

ಈ ಎರಡೂ ಚಿತ್ರಗಳ ಶೂಟಿಂಗ್ ಚೆನ್ನೈನ ಒಂದೇ ಸ್ಟುಡಿಯೋದಲ್ಲಿ ನಡೆಯುತ್ತಿದೆ

ಈ ಶೂಟಿಂಗ್ ವೇಳೆ ರಜನಿ ಮತ್ತು ಕಮಲ್ ಭೇಟಿಯಾಗಿ ಖುಷಿಪಟ್ಟಿದ್ದಾರೆ

ಎರಡೂ ಚಿತ್ರಗಳ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಈ ಫೋಟೋವನ್ನು ಹಂಚಿಕೊಂಡಿದೆ.