ಭಾರತದಲ್ಲಿ ಉತ್ತಮ ಇಂಧನ ದಕ್ಷತೆ ಹೊಂದಿರುವ ಕಾರುಗಳು

ಒಂದೇ ಫ್ಲ್ಯಾಟ್ ಫಾರ್ಮ್ ಆಧರಿಸಿದ ಟೊಯೊಟಾ ಹೈರೈಡರ್ ಹಾಗೂ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ 1.5 ಲೀಟರ್, 3 ಸಿಲಿಂಡರ್ ಸ್ಟ್ರಾಂಗ್ ಹೈಬ್ರೀಡ್ ಪೆಟ್ರೋಲ್ ಎಂಜಿನ್‍ನೊಂದಿಗೆ ಬರುತ್ತದೆ. ಇದರ ಕ್ಲೈಮ್ ಮಾಡಲಾದ ಇಂಧನ ದಕ್ಷತೆ 27.9 kmpl Image Courtesy : www.toyotabharat.com and www.nexaexperience.com

ಹೋಂಡಾದ ಸಿಟಿ ಇ : ಹೆಚ್‍ಇವಿ ಹೈಬ್ರೀಡ್ ಸೆಡಾನ್ 1.5 ಲೀಟರ್, 4 ಸಿಲಿಂಡರ್ ಸ್ಟ್ರಾಂಗ್ ಹೈಬ್ರೀಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ. ಈ ಕಾರಿನ ಕ್ಲೈಮ್ ಮಾಡಲಾದ ಮೈಲೇಜ್ 27.1 kmpl Image Courtesy : www.hondacarindia.com

ಮಾರುತಿ ಸುಜುಕಿ ಸೆಲಾರಿಯೋ 1.0 ಲೀಟರ್, 3 ಸಿಲಿಂಡರ್ ಎನ್ ಎ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಕ್ಲೈಮ್ ಮಾಡಲಾದ ಇಂಧನ ದಕ್ಷತೆ ಎಎಂಟಿ ಯಲ್ಲಿ 26.7 kmpl ಹಾಗೂ ಎಂಟಿ ರೂಪಾಂತರದಲ್ಲಿ 25 kmpl Image Courtesy : www.marutisuzuki.com

ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಝಡ್ ಸೀರಿಸ್, 1.2 ಲೀಟರ್, 3 ಸಿಲಿಂಡರ್ ಎನ್ ಎ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ. ಎಂಟಿ ವೇರಿಯೆಂಟ್ ನಲ್ಲಿ 24.8 kmpl ಹಾಗೂ ಎಎಂಟಿ ರೂಪಾಂತರದಲ್ಲಿ 25.7 kmpl ಇಂಧನ ದಕ್ಷತೆಯನ್ನು ನೀಡುತ್ತದೆ ಎನ್ನಲಾಗುತ್ತದೆ Image Courtesy : www.marutisuzuki.com

ಟಾಟಾ ನೆಕ್ಸಾನ್ 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ನೊಂದಿಗೆ ಬರುತ್ತದೆ. ಎಂಟಿ ರೂಪಾಂತರದಲ್ಲಿ 23.2 kmpl ಹಾಗೂ ಎಎಂಟಿ ವೇರಿಯೆಂಟಿನಲ್ಲಿ 24.1 kmpl ಮೈಲೇಜ್ ಅನ್ನು ಇದು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. Image Courtesy : cars.tatamotors.com