ಅಕ್ಟೋಬರ್‌ನಲ್ಲಿ ಪ್ರವಾಸದ ಪ್ಲ್ಯಾನ್‍ನಲ್ಲಿದ್ದೀರಾ? : ಹಾಗಾದರೆ ಈ ತಾಣಗಳೂ ಉತ್ತಮ

ಅಕ್ಟೋಬರ್‌ನಲ್ಲಿ ಸಿಗುವ ರಜೆಯಲ್ಲಿ ಟೂರ್ ಹೋಗುವ ಪ್ಲ್ಯಾನ್‍ನಲ್ಲಿ ನೀವಿದ್ದೀರಾ? ಹಾಗಾದರೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಈ ಕೆಲವು ಸುಂದರ ತಾಣಗಳು ನಿಮಗೆ ಖುಷಿ ನೀಡಬಹುದು | Image Courtesy : pexels

2020

2,4

m

Multiple Blue Rings

Currently there are 2.4m vehicles on the road with some level of automation.

ಗೋಕರ್ಣ ಬೀಚ್‍ನಲ್ಲಿ ಆಟ ಆಡಲು ನೀವು ಬಯಸಿದರೆ ಗೋಕರ್ಣ ಉತ್ತಮ ತಾಣ. ಜೊತೆಗೆ ಇಲ್ಲಿನ ಪ್ರಸಿದ್ಧ ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು | Image Courtesy : pexels

ಬಾದಾಮಿ ಚಾಲುಕ್ಯರ ರಾಜಧಾನಿ ಬಾದಾಮಿ ಗತ ಇತಿಹಾಸದ ಅದ್ಭುತವನ್ನು ಕಣ್ಣೆದುರಿಗೆ ತರುತ್ತದೆ. ಅಪೂರ್ವ ದೇವಸ್ಥಾನಗಳು, ಗುಹಾಂತರ ದೇಗುಲಗಳು, ಕಲ್ಲಿನ ಕೆತ್ತನೆ ಇಲ್ಲಿ ಖುಷಿ ನೀಡುತ್ತದೆ | Image Courtesy : pexels

Multiple Blue Rings
Multiple Blue Rings

ಹಂಪಿ ಹಂಪಿಯ ತುಂಬಾ ಪುರಾತನ ವೈಭವದ ಕುರುಹುಗಳು ಕಾಣಸಿಗುತ್ತವೆ. ಅದ್ಭುತ ದೇಗುಲಗಳು ಇಲ್ಲಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸದೇ ಇರದು | Image Courtesy : pexels

ಕೂನೂರ್ ತಮಿಳುನಾಡಿನ ಸುಂದರ ಗಿರಿಧಾಮವಿದು. ನಿಸರ್ಗ ಪ್ರಿಯರನ್ನು ಕೂನೂರ್ ಸೆಳೆಯದೇ ಬಿಡದು. ಇಲ್ಲಿನ ಚಹಾ ತೋಟದ ಸೊಬಗು ಕೂಡಾ ಅದ್ಭುತ | Image Courtesy : pexels

Fill in some text

ಮುನ್ನಾರ್ ಚಹಾ ತೋಟ, ಸುಂದರ ಗಿರಿಗಳು, ಆಹ್ಲಾದಕರ ವಾತಾವರಣದಿಂದ ಕಣ್ಮನ ಸೆಳೆಯುವ ತಾಣಗಳಲ್ಲಿ ತಮಿಳುನಾಡಿನ ಮುನ್ನಾರ್ ಕೂಡಾ ಸೇರುತ್ತದೆ. ರಜೆಯನ್ನು ಇಲ್ಲಿ ಸಖತ್ ಎಂಜಾಯ್ ಮಾಡಬಹುದು | Image Courtesy : pexels

ವರ್ಕಲಾ ಕೇರಳದ ಪ್ರವಾಸದ ಪ್ಲ್ಯಾನ್‍ನಲ್ಲಿದ್ದರೆ ವರ್ಕಲಾ ಬೀಚ್‍ಗೂ ಭೇಟಿ ನೀಡಬಹುದು. ಆಹ್ಲಾದಕರ ವಾತಾವರಣ ಮತ್ತು ಸುಂದರ ಬೀಚ್‍ಗೆ ವರ್ಕಲಾ ಹೆಸರುವಾಸಿ | Image Courtesy : pexels

ಕುಮಾರಕೋಮ್ ಕೇರಳದ ಇನ್ನೊಂದು ಸುಂದರ ತಾಣವಿದು. ಹಿನ್ನೀರಿನ ಸೊಬಗನ್ನು ಇಲ್ಲಿ ಕಣ್ತುಂಬಿಕೊಳ್ಳುವ ಖುಷಿಯೇ ಅನನ್ಯ. ದೇವರ ನಾಡಿನ ಪ್ರವಾಸದ ಸಿದ್ಧತೆ ಮಾಡುತ್ತಿದ್ದರೆ ಕುಮಾರಕೋಮ್ ಅನ್ನೂ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು | Image Courtesy : pexels

Level 5

Relax and enjoy

Full driving automation. Does not require human attention. No pedals or steering wheels.

Blue Rings

ತೆಕ್ಕಡಿ ನಗರದ ಜಂಜಾಟದಿಂದ ದೂರ ಇದ್ದು ಆನಂದದಿಂದ ಕಳೆಯಬೇಕು ಎನ್ನುವವರಿಗೆ ತೆಕ್ಕಡಿ ಕೂಡಾ ಸೂಕ್ತ ಸ್ಥಳ. ಕೇರಳದ ಈ ಸುಂದರ ತಾಣ ನೈಸರ್ಗಿಕ ರಸದೌತಣವನ್ನು ಉಣಬಡಿಸುವ ಜೊತೆಗೆ ಮನಸ್ಸಿಗೆ ಬಲು ಆನಂದವನ್ನು ನೀಡುತ್ತದೆ | Image Courtesy : pexels

ಲೇಪಾಕ್ಷಿ ಕರ್ನಾಟಕ ಗಡಿಗೆ ಹತ್ತಿರ ಇರುವ ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಿರುವ ಐತಿಹಾಸಿಕ, ಧಾರ್ಮಿಕ ತಾಣವಿದು. ಲೇಪಾಕ್ಷಿಗೆ ಬೆಂಗಳೂರಿನಿಂದ ಇರುವ ದೂರ ಸುಮಾರು 123 ಕಿಮೀ. ಪ್ರಕೃತಿ ಪ್ರಿಯರಿಗೂ ಖುಷಿ ನೀಡುವ ತಾಣವಿದು | Image Courtesy : pexels