ನವೆಂಬರ್ ಪ್ರವಾಸಕ್ಕೆ ಈ ಗಿರಿಧಾಮಗಳು ಬೆಸ್ಟ್

ನವೆಂಬರ್ ಪ್ರವಾಸದ ಪ್ಲ್ಯಾನ್ ಮಾಡುತ್ತಿದ್ದರೆ ನೀವು ದಕ್ಷಿಣ ಭಾರತದಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡಬಹುದು

ಕೊಡಗು : ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಸಿದ್ಧ. ಇಲ್ಲಿನ ಹಸಿರ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಸಾಕಷ್ಟು ಅದ್ಭುತ ಸ್ಥಳಗಳು ಇಲ್ಲಿವೆ

ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ಪಶ್ಚಿಮಘಟ್ಟಗಳ ಸೊಬಗನ್ನು ಉಣಬಡಿಸುತ್ತದೆ. ಇಲ್ಲಿ ಭೇಟಿ ನೀಡುವಂತಹ ಹಲವರು ಸುಂದರ ಸ್ಥಳಗಳಿವೆ

ಚಿಕ್ಕಮಗಳೂರು : ನಿಸರ್ಗದ ಸುಂದರ ಮಡಿಲಿನಲ್ಲಿ ಕಾಲ ಕಳೆಯಲು ಕಾಫಿನಾಡು ಚಿಕ್ಕಮಗಳೂರು ಕೂಡಾ ಬೆಸ್ಟ್. ಇಲ್ಲಿನ ಭವ್ಯ ಭೂದೃಶ್ಯಗಳು ಕಣ್ಣಿಗೆ ಹಬ್ಬ

ವಯನಾಡ್ : ಪಶ್ಚಿಮಘಟ್ಟಗಳಿಂದ ಸುತ್ತುವರಿದ ಕೇರಳದ ಸುಂದರ ಸ್ಥಳವಿದು. ಹಸಿರಗಿರಿ, ತೋಟ ಗದ್ದೆಗಳು, ವನ್ಯಜೀವಿ ಧಾಮ ಇಲ್ಲಿ ಖುಷಿ ನೀಡುತ್ತದೆ

ವಾಗಮೊನ್ : ಇದೂ ಕೇರಳದ ಸುಂದರ ಸ್ಥಳಗಳಲ್ಲಿ ಒಂದು. ನಿಸರ್ಗದ ಸೌಂದರ್ಯ ಸವಿಯಲು, ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಇದೂ ಉತ್ತಮ ತಾಣ

ಊಟಿ : ನೀಲಗಿರಿ ಬೆಟ್ಟಗಳಲ್ಲಿರುವ ಊಟಿ ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಹಸಿರಸಿರಿ, ಮೌಂಟೇನ್ ಟ್ರೈನ್ ಸವಾರಿ ಖುಷಿ ನೀಡುತ್ತದೆ

ಕೊಡೈಕೆನಾಲ್ : ಸುಂದರ ಪರಿಸರದಲ್ಲಿ ಹಾಯಾಗಿ ಕಾಲ ಕಳೆಯುವುದಕ್ಕೆ ಕೊಡೈಕೆನಾಲ್ ಕೂಡಾ ಉತ್ತಮ ಆಯ್ಕೆ. ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ

ಕೂನೂರ್ : ತಮಿಳುನಾಡಿನ ಇನ್ನೊಂದು ಸುಂದರ ಗಿರಿಧಾಮವಿದು. ಟೀ ಎಸ್ಟೇಟ್‍ಗಳಿಗೆ ಇದೂ ಹೆಸರುವಾಸಿ. ಇಲ್ಲೂ ಮೌಂಟೇನ್ ಟ್ರೈನ್ ಸವಾರಿಯ ಆನಂದ ಪಡೆಯಬಹುದು

ಎರ್ಕಾಡ್ : ತಮಿಳುನಾಡಿನಲ್ಲಿರುವ ಸುಂದರ ಗಿರಿಧಾಮವಿದು. ಕಾಫಿ, ಹಣ್ಣುಗಳು ಮತ್ತು ಮಸಾಲೆ ತೋಟಗಳಿಗೆ ಇದು ಹೆಸರುವಾಸಿ. ರಜಾ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು

ನವೆಂಬರ್ ಪ್ರವಾಸಕ್ಕೆ ಈ ಗಿರಿಧಾಮಗಳು ಬೆಸ್ಟ್