ಮುಂಜಾನೆಯ ಕ್ರಮಬದ್ಧ ದಿನಚರಿ ಆರಂಭಿಸಲು ಈ ಟಿಪ್ಸ್ ಫಾಲೋ ಮಾಡಿ

ಮುಂಜಾನೆ ಶಿಸ್ತು, ಕ್ರಮಬದ್ಧ ದಿನಚರಿಯ ಆರಂಭ ಯಶಸ್ಸಿಗೆ ಪೂರಕ. ಇಂತಹ ಶಿಸ್ತಿನ ದಿನಚರಿಯ ಪಾಲನೆಯಿಂದ ಸಾಕಷ್ಟು ಅದ್ಭುತ ಪ್ರಯೋಜನಗಳೂ ಇವೆ.

ಸಾಧ್ಯವಾದಷ್ಟು ಸೂರ್ಯೋದಯಕ್ಕೆ ಮುನ್ನ ಏಳಿ ಅಥವಾ ಬೆಳಗ್ಗೆ 5-6ರ ನಡುವೆ ಹಾಸಿಗೆಯಿಂದ ಎದ್ದೇಳಿ. ಇದು ಆರೋಗ್ಯಕ್ಕೂ ಉತ್ತಮ.

ವ್ಯಾಯಾಮಕ್ಕೆ ಒಂದಷ್ಟು ಸಮಯ ಮೀಸಲಿಡಿ. ಪ್ರತಿದಿನ ವ್ಯಾಯಾಮ ಮಾಡುವುದು ಬಹಳ ಅಗತ್ಯ. ಇದರಿಂದ ಆರೋಗ್ಯ ವೃದ್ಧಿಯಾಗುವುದು.

ನೀರು ಸೇವಿಸಿ. ದೇಹಕ್ಕೆ ಸರಿಯಾದ ಪ್ರಮಾಣದ ನೀರು ಕೂಡಾ ಅವಶ್ಯಕ. ಇದು ನಿರ್ಜಲೀಕರಣವನ್ನು ತಪ್ಪಿಸುತ್ತದೆ. 

ಪ್ರೋಟಿನ್ ಸೇರಿ ಪೌಷ್ಟಿಕಾಂಶಯುಕ್ತ ಗುಣಮಟ್ಟದ ಉಪಹಾರ ಸೇವಿಸಿ. ಇದು ನಿಮ್ಮ ದಿನದ ಚಟುವಟಿಕೆಗೆ ಶಕ್ತಿ ತುಂಬಲು ಸಹಾಯಕ.

ಸಾಧ್ಯವಾದಷ್ಟು ಕೆಫೀನ್ ಸೇವನೆ ಕಡಿಮೆ ಮಾಡಿ ಅಥವಾ ಚಹಾ, ಕಾಫಿ ಸೇವನೆಗೆ ಮಿತಿ ಹಾಕಿ. ಕೆಫೀನ್ ಕಡಿಮೆ ಸೇವನೆಯಿಂದ ಸಾಕಷ್ಟು ಪ್ರಯೋಜನಗಳೂ ಇವೆ.

ಧೂಮಪಾನದಂತಹ ದುಶ್ಚಟದಿಂದ ದೂರವಿರಿ. ಇದು ಆರೋಗ್ಯಕ್ಕೆ ಹಾನಿ ತರುವ ಜೊತೆಗೆ ದಿನವಿಡೀ ಆಯಾಸದ ಅನುಭವವನ್ನೂ ತರಬಹುದು.

ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸವಿದ್ದರೆ ಬಿಡಿ. ಸಾಧ್ಯವಾದಷ್ಟು ಮೊಬೈಲ್ ಫೋನ್‍ನಿಂದ ದೂರವಿದ್ದು ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. 

ನಿಮ್ಮ ದಿನದ ಚಟುವಟಿಕೆಯ ಪಟ್ಟಿಯನ್ನು ಮಾಡಿ. ಅನಿವಾರ್ಯ ಅಥವಾ ತುರ್ತು ಪರಿಸ್ಥಿತಿಯ ಹೊರತಾಗಿ ಈ ಪಟ್ಟಿಯನ್ನು ಶಿಸ್ತಿನಿಂದ ಪಾಲಿಸಿ.